ವೃತ್ತಿ ನೈಪುಣ್ಯತೆ ಕುರಿತು ಲೇಖನ: ಕೋವಿಡ್ 19 ಮಹಾಮಾರಿಯ ಸಂದರ್ಭದಲ್ಲಿ ಅದರಲ್ಲಿಯೂ ಲಾಕ್ಡೌನ್ ಸಮಯದಲ್ಲಿ ಸಮಯ ಹೇಗೆ ಕಳೆಯುವುದು ಎನ್ನುವುದು ಸಮಸ್ಯೆಯಾಗಿತ್ತು ಇಂತಹ ವಿಷಮ ಪರಿಸ್ಥಿತಿಯಲ್ಲಿ ಇಲಾಖೆ ಹೊರಡಿಸಿದ ಆದೇಶಗಳು ಪಾಲನೆ ಮಾಡುವುದರ ಜೊತೆಗೆ ಆರೋಗ್ಯ ಕೂಡ ಕಾಪಾಡುವುದು ಜೊತೆಗೆ ಜೊತೆಗೆ ಕಾರ್ಯ ನಿರ್ವಹಿಸಲಾಯಿತು. ಲಾಕ್ಡನ್ ಸಂದರ್ಭದಲ್ಲಿ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಅವರು ನೀಡಿದ ಆದೇಶದಂತೆ ಶಿಕ್ಷಕರಿಗೆ ನೀಡಿದ ಜವಾಬ್ದಾರಿಗಳು ವೃತ್ತಿ ನೈಪುಣ್ಯತೆ ಹೆಚ್ಚಿಸಲು ಸಹಕಾರಿಯಾಗಿದೆ. ವರ್ಕ್ ಫ್ರಮ್ ಹೋಮ್ ಕೆಲಸ ನೀಡಿರುವುದು ಪ್ರಸ್ತುತ ಸಮಯದಲ್ಲಿ ಅರ್ಥಪೂರ್ಣವಾಗಿದೆ. ವಿಷಯ ಶಿಕ್ಷಕರಿಗೆ ತಮ್ಮ ತಮ್ಮ ವಿಷಯದಲ್ಲಿ ಅಧ್ಯಯನ ಮಾಡಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿದೆ ಪಾಠಗಳ ಪುನರ್ಮನನ ಮಾಡುವುದು ಘಟಕ ಯೋಜನೆ ತಯಾರಿಸುವುದು ವಿಷಯಕ್ಕೆ ಸಂಬಂಧಿಸಿದ ಆಡಿಯೋ ವಿಡಿಯೋ ಗಳು ಕೇಳುವುದು ಮತ್ತು ನೋಡುವುದು ವಿಷಯ ಜ್ಞಾನ ಹೆಚ್ಚಿಸಲು ಸಹಕಾರಿಯಾಗಿದೆ. ವಿಷಯಕ್ಕೆ ಸಂಬಂಧಿಸಿದ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸುವುದು ಪಾಲಕ ಪೋಷಕರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಅಭ್ಯಾಸದ ಕುರಿತು ಚರ್ಚಿಸುವುದು ಇದರಿಂದ ಶಾಲಾ ರಜಾ ಅವಧಿಯಲ್ಲಿ ಶಿಕ್ಷಕರು ಮಕ್ಕಳೊಂದಿಗೆ ವಿದ್ಯಾಭ್ಯಾಸ ಕುರಿತು ಚರ್ಚಿಸುವುದರಿಂದ ಮಕ್ಕಳಲ್ಲಿಯೂ ಕೂಡ ಓದುವುದು ಬರೆಯುವುದು ಆನ್ಲೈನ್ ತರಗತಿಗಳು ವೀಕ್ಷಣೆ ಮಾಡುವುದರಿಂದ ಹಾಗೂ ಚಂದನ ದೂರದರ್ಶನ...